ನಮ್ಮ ಬಯಲು ಗ್ರಂಥಾಲಯಕ್ಕೆ ಹಿರಿಯ ಮಕ್ಕಳ ಕವಿ ಶ್ರೀ ಎ.ಕೆ.ರಾಮೇಶ್ವರ ಅವರಿಂದ 100 ಕ್ಕೂ ಹೆಚ್ಚು ಪುಸ್ತಕಗಳ ದೇಣಿಗೆ.........,ಮಕ್ಕಳ ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ನಮ್ಮ ಸಂಸ್ಥೆಗೆ ಆಗಮಿಸುವ ಹಿಂದಿನ ದಿನ ಸರ್ ನಾಳೆ ತಮ್ಮಿಂದ ಪುಸ್ತಕ ದಾಸೋಹ ಆಗಲಿ ಎಂದಾಗ ಬಹಳ ಸಂತೋಷದಿಂದ ಒಪ್ಪಿಕೊಂಡು ಎರಡು ಬಾಕ್ಸ್ ಗಳಲ್ಲಿ 100 ಕ್ಕೂ ಹೆಚ್ಚು ಪುಸ್ತಕಗಳನ್ನು ತಂದು ಕೊಟ್ಟರು. ಇಂತಹ ಹಲವು ದಾನಿಗಳಿಂದ ಬಂದ ಪುಸ್ತಕಗಳಿಂದ ಬಯಲು ಗ್ರಂಥಾಲಯ ತುಂಬುತ್ತಿದೆ.ಶಿಬಿರಕ್ಕೆ ಆಗಮಿಸಿದ ವಿವಿಧ ಶಾಲೆಗಳ ಮಕ್ಕಳು ಶಿಕ್ಷಕರು ಬಯಲು ಗ್ರಂಥಾಲಯ ವೀಕ್ಷಿಸಿ ಆಸಕ್ತಿಯಿಂದ ಓದಿದರು.

Comments