ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಮಕ್ಕಳೇ ಕವನ ರಚಿಸಿ,ವಾಚಿಸಿ ಚಪ್ಪಾಳೆ ಗಿಟ್ಟಿಸಿದರು......ಹೌದು ಮಕ್ಕಳಲ್ಲಿ ಕಾವ್ಯ ರಚನಾ ಕೌಶಲ್ಯ ಹಾಗೂ ಸಾಮಾರ್ಥ್ಯ ಬೆಳೆಸಲು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿಧ್ಯಾ ಸಂಸ್ಥೆಯಲ್ಲಿ ಕ.ಸಾ.ಪ ಶಹಾಬಾದ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಪ್ರೌಢ ಶಾಲಾ ಮಕ್ಕಳ ತಾಲೂಕ ಮಟ್ಟದ ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಮಕ್ಕಳು ಹಿರಿಯ ಕವಿಗಳ ಜೊತೆ ಬೆರೆತು ತಾವು ಕವನ ರಚಿಸಿದರು.ಶ್ರೀ ಏ.ಕೆ.ರಾಮೇಶ್ವರ , ಹಣಮಂತ ತೀರ್ಥ, ಡಾಕ್ಟರ್ ಮಲ್ಲಿನಾಥ ತಳವಾರ್ ಸಂಪನ್ಮೂಲ ವ್ಯಕ್ತಿಗಳು ಶಿಬಿರವನ್ನು ಯಶಸ್ವಿ ಗೊಳಿಸಿದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮ ಯಶಸ್ವಿಗೋಳಿಸಿದ ನಮ್ಮ ಗುರುವೃಂದಕ್ಕೆ ಹೃದಯ ಪೂರ್ವಕ ಧನ್ಯವಾದಗಳು🙏🏼

Comments