"ಮಕ್ಕಳಿಗೆ ಮೊಹರಮ್ ಹಾಗೂ ಹಂತಿ ಹಾಡುಗಳನ್ನು ಹಾಡಿ ರಂಜಿಸಿದ ಜಾನಪದ ಕಲಾವಿದ ಅಣ್ಣಪ್ಪ ಪೂಜಾರಿ" .......ಹೆಬ್ಬಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರೀ ಅಣ್ಣಪ್ಪ ಪೂಜಾರಿ. ಮರೆಯಾಗುತ್ತಿರುವ ಹಂತಿಯ ಹಾಡು, ಮೊಹರಮ್ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ತನ್ನ ಮೊಮ್ಮಗನನ್ನು ನಮ್ಮ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಸೇರಿಸಲು ಬಂದಾಗ ಮೊದಲೇ ಪರಿಚಯವಿದ್ದ ಈತನ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿ ತಕ್ಷಣವೇ ಜಾನಪದ ಝೇಂಕಾರ ಹೆಸರಲ್ಲಿ ಕಾರ್ಯಕ್ರಮ ರೂಪಿಸಿ ಮಕ್ಕಳ ಮುಂದೆ ಆತನ ಕಲೆಯ ಅನಾವರಣ ಮಾಡಲಾಯಿತು. ಅತ್ಯಂತ ಖುಷಿಯಿಂದಲೇ ತನ್ನ ಮನಸ್ಸಿನ ಮಾತು ಹಂಚಿಕೊಂಡರು. ಮರೆಯಾಗುತ್ತಿರುವ ಅಪ್ಪಟ ಗ್ರಾಮೀಣ ಜಾನಪದ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂಬ ವಿಚಾರದಿಂದ ಈ ಪ್ರಯತ್ನ ನಡೆಯಿತು. ಮುಂದಿನ ದಿನಗಳಲ್ಲಿ ಇನ್ನೂ ಹಲವು ವಿಭಿನ್ನ ಪ್ರಯತ್ನಗಳು ನಡೆಯುತ್ತವೆ.....

Comments